top of page

 ನನ್ನ ಮಾರ್ಗದರ್ಶಿಗಳು

asd_edited.png

ಪೂಜ್ಯ ಶ್ರೀ ರಾಘವೇಂದ್ರರಾವ್ (ಅಪ್ಪ ಅವರು)
ರಾಯಚೂರ್, ಕರ್ನಾಟಕ.

ಅಪ್ಪಾ ಎಂದು ಪ್ರೀತಿಯಿಂದ ಕರೆಯಲ್ಪಡುವ ಪೂಜ್ಯ ಶ್ರೀ ರಾಘವೇಂದ್ರ ರಾವ್ ಅವರು 1925 ರ ಮಾರ್ಚ್ 19 ರಂದು ಆಂಧ್ರಪ್ರದೇಶದ ನಾರಾಯಣಪೇಟೆಯ ಪಾತಪಲ್ಲೆ ಎಂಬ ಗ್ರಾಮದಲ್ಲಿ ಜನ್ಮಿಸಿದರು. ಅವರ ತಂದೆಯ ಹೆಸರು ಶ್ರೀ ಕಿಶನ್‌ರಾವ್ ಮತ್ತು ತಾಯಿ ಶ್ರೀಮತಿ ವೆಂಕಮ್ಮ. ಅವರು, ಅವರ ಅಕ್ಕನ ಮಗಳಾದ ಶ್ರೀಮತಿ ದ್ರೌಪತಿ ಬಾಯಿ ಅವರನ್ನು ವಿವಾಹವಾದರು. ಅವರಿಗೆ ಮೂವರು ಗಂಡು ಮಕ್ಕಳು ಮತ್ತು ನಾಲ್ವರು ಹೆಣ್ಣು ಮಕ್ಕಳು.

 

ಅವರು ವಿಜ್ಞಾನದಲ್ಲಿ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಬ್ಯಾಚಿಲರ್ ಪದವಿ ಮುಗಿಸಿ ಉಪನ್ಯಾಸಕರಾಗಿ ಬೀದರ್ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕೆಲಸಮಾಡಿದರು. ಅವರು ಕರ್ನಾಟಕ ರಾಜ್ಯದಲ್ಲಿ ಬಳ್ಳಾರಿ, ಗುಲಬರ್ಗಾ ಮತ್ತು ಹಾಸನದಂತಹ ವಿವಿಧ ಸ್ಥಳಗಳಲ್ಲಿ ತಮ್ಮ ಸೇವೆ ಸಲ್ಲಿಸಿದರಲ್ಲದೇ, ಸರ್ಕಾರಿ ಪಾಲಿಟೆಕ್ನಿಕ್ ರಾಯಚೂರಿನ ಪ್ರಾಂಶುಪಾಲರಾಗಿಯೂ ಕೆಲಸ ಮಾಡಿದರು ಮತ್ತು ಕಡೆಯದಾಗಿ 1982 ರಲ್ಲಿ ತಾಂತ್ರಿಕ ಶಿಕ್ಷಣ ಇಲಾಖೆ ಬೆಂಗಳೂರಿನ ಉಪ ನಿರ್ದೇಶಕರಾಗಿ ನಿವೃತ್ತರಾದರು.

 

ವಿನಮ್ರ ಅನ್ವೇಷಕರಾದ ಶ್ರೀ ರಾಘವೇಂದ್ರ ರಾವ್ ಅವರು ಸಮರ್ಥ ಸದ್ಗುರು ಶ್ರೀ ರಾಮಚಂದ್ರಜಿ ಮಹಾರಾಜ್ ಅವರನ್ನು 1955 ರ ಅಕ್ಟೋಬರ್ 22 ರಂದು ಷಾಹಜಹಾನ್‌ಪುರದಲ್ಲಿ ಅವರ ನಿವಾಸದಲ್ಲಿ ಭೇಟಿಯಾದರು.

 

ಅವರ ಮೊದಲ ಭೇಟಿಯು ದೈವೀ ಪ್ರೇಮವಾಗಿ ಪರಿಣಮಿಸಿತ್ತಲ್ಲದೆ, ಸಮರ್ಥ ಸದ್ಗುರುಗಳ ಕೃಪೆಯಿಂದಾಗಿ ಅವರ ಅಂತರಂಗವು ಗುರಿವಿನಂತೆಯೇ ಪರಿವರ್ತನೆ ಹೊಂದಿತ್ತು. ಅವರ ಮೊದಲ ಭೇಟಿಯ ನಂತರ ಶ್ರೀ ರಾಘವೇಂದ್ರ ರಾವ್ ಅವರಿಗೆ ಗುರುಗಳಾದ ಪುಜ್ಯ ಬಾಬೂಜಿ ಮಹಾರಾಜರು ತಮ್ಮ ಮೊದಲ ಪತ್ರದಲ್ಲಿ ಈ ರೀತಿ ಬರೆದರು “ಎಲ್ಲರೂ ನನ್ನನ್ನು ನೋಡಲು ಬರುವರು ಆದರೆ ನೋಡದೆಯೇ ಮರಳಿಹೋಗುವರು, ಆದರೆ ನೀನು ನನ್ನನ್ನು ನಿನ್ನೊಟ್ಟಿಗೆ ಕರೆದೊಯ್ದಿರುವೆ”.

 

ನಿಜವಾದ ಮಾನವನಾಗಲು ಸಹಜ ಮಾರ್ಗ ಒಂದೇ ಖಚಿತವಾದ ಸಾಧನವಾಗಿದೆ ಮತ್ತು ಇದು ಮಾನವನು ತಲುಪ ಬೇಕಾದ ಏಕೈಕ ಗುರಿಯಾಗಿದೆ ಎಂದು ಅವರು ಸಾರಿ ಹೇಳಿದರು. ಅವರು ಸಹಜ ಮಾರ್ಗದ ತತ್ವಶಾಸ್ತ್ರದ ಬಗ್ಗೆ ಸಹಜ ಮಾರ್ಗ ಸಮೀಕ್ಷೆ, ಸಹ ಪಥಿಕನ ಕರೆ ಮುಂತಾದ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಅವರು ವಿವಿಧ ಪ್ರದೇಶಗಳಿಗೆ, ಮತ್ತು ವಿದೇಶಗಳಿಗೆ ಭೇಟಿ ನೀಡಿ ಅನೇಕ ಸತ್ಸಂಗಗಳಲ್ಲಿ ಭಾಗವಹಿಸಿ ಅನೇಕ ಅಭ್ಯಾಸಿಗಳಿಗೆ ಮಾರ್ಗದರ್ಶನ ನೀಡಿದರು.

 

ಅವರು ಭಾಗವಹಿಸಿದ ಕೊನೆಯ ಸತ್ಸಂಗವು ರಾಯಚೂರ್ ಆಶ್ರಮದಲ್ಲಿ ಮಾರ್ಚ್ 19, 2006 ರಂದು ಅವರ 81 ನೇ ಜನ್ಮದಿನದಂದಾಗಿದ್ದಿತು. ಅವರು ಏಪ್ರಿಲ್ 10, 2006 ರಂದು ರಾಯಚೂರಿನಲ್ಲಿರುವ ತಮ್ಮ ಸ್ವಗೃಹದಲಿ ಭೌತಿಕ ಶರೀರವನ್ನು ತ್ಯಜಿಸಿದರು.

 

ಅವರು ಸಹಜಮಾರ್ಗ ಪದ್ಧತಿಯ ವ್ಯಕ್ತಿತ್ವವಾಗಿದ್ದು ಮತ್ತು ಸಾಧನೆಯ ಸಾರವಾಗಿದ್ದು ಗುರುಗಳ ಸಾಮರ್ಥ್ಯವನ್ನು ಸಾರಿದರು. ಅವರು ತಮ್ಮ ಜೀವನದ ಕೊನೆಯ ಉಸಿರಿರುವತನಕ ಸದ್ಗುರುಗಳಲ್ಲಿ  ಪ್ರಾಮಾಣಿಕರಾದ ಅನ್ವೇಷಕ ಮತ್ತು ಶಿಷ್ಯರಾಗಿಯೇ ಉಳಿದರು. ಅವರು ಗುರುಗಳ ಜೊತೆಗೆ ದಿವ್ಯ ಲೋಕದಲ್ಲಿ ನೆಲೆಸಿರುವರು.

bottom of page